'CHOLA CHOLA' KANNADA SONG LYRICS
This beautiful song perfectly captures the spirit of ancient India - a great civilisation built on strength and courage, and protected by brave warriors . . .
Lyrics: Ilango Krishnan (Tamil) / Jayant Kaikini (Kannada)
Singers: Ravi Basrur, Nakul Abhyankar
Music: A R Rahman
Movie: Ponniyin Selvan - 1
ಗಗನದಲ್ಲಿ ಪಟ ಪಟ ಪಟ ಬಡಿದು
ಕದನದಲ್ಲಿ ಹಟ ಹಟ ಹಟ ಮೆರೆದು
ಕುದುರೆಗಳು ಪುಟ ಪುಟ ಪುಟ ನೆಗೆದು
ವಿಜಯವಿದು ಕಾದಾಡು ಕಾದಾಡು
ಹೋರಾಡು ಹೋರಾಡು
ಮೊಳಗಲಿ ಹುಲಿಗಳೆ ವೀರಗರ್ಜನೆ
ಭುವನದಿ ಬೆರಗಿನ ಚೋಳ ವರ್ಣನೆ
ಹೆದರದು ಹುಲಿ ಎಲ್ಲಿದ್ದರೂ
ಏನೆಂದರೂ ಚೋಳ ಚೋಳ
ಅರಿಯದು ಹುಲಿ ಸೋಲೆಂದರೇ
ಏನೆಂಬುದಾ ಕೇಳಾ ಕೇಳಾ
ನಾಗಾಲೋಟ ಹೊಳೆದಿದೆ ಉರಿಗಣ್ಣಲ್ಲೇ
ವೀರಾವೇಶ ಖುರಪುಟಗಳ ದೂಳಿನಲ್ಲೇ
ಕುಣಿ ಕುಣಿ ಧ್ವಜ ಹಿಡಿದು . . .
ವಿಜಯವಿದು ಕಾದಾಡು ಕಾದಾಡು . . .
ಹನಿ ಮದಿರೆಗೆ ಓಲಾಡುತಾ
ತೇಲಾಡುತಾ ನನ್ನ ಲೋಕ
ಇಹ ಪರಗಳು ಒಂದಾಗಿರೇ
ಸಂಗಾತಿಯಾ ಆಸೆ ಬೇಕಾ
ಮಣ್ಣೀನ ಗುಣವೇ ಮಾತಾಡು
ಕಣ್ಣೀರ ಕ್ಷಣವೇ ಮಾತಾಡು
ಮತ್ತೇರೋ ಗುಟುಕೇ ಮಾತಾಡು
ಮುದ್ದಾದ ಮಾರಾಯ್ತಿ ಮಾತಾಡು
ಮಣ್ಣೀನ ಗುಣವೇ ಮಾತಾಡು . . .
ಲಲನೇ
ನನ್ನ ಕಾಯವು ಗಾಯವು ನೀನೇ
ಇದೊ ಇದೊ ತನುವಿನಲಿ
ಸಮರಗಳ ವಿಧ ವಿಧ ಹಳೆ ಕಲೆಯು
ಹೃದಯದಲ್ಲಿ ಬಿರಿ ಬಿರಿಯುವ ಉರಿಯು
ಕರೆಯುತಿದೆ ಕೊಡು
ಸೋಮರಸ ಗುಟುಕೇ ಸುರಿದು
ಇದೇ ಕಾಳಗವು ನೋಡಿನ್ನು
ಹಿಡೀ ಖಡ್ಗವನು ಸೆಳೆದು ಹಿರಿದು
ಸಿಡೀ ಮರೆಯದಿರು ಸೇಡನ್ನು
ಹನಿ ಮದಿರೆಗೆ ಓಲಾಡುತಾ . . .
ಕಂಡಿತ್ತೋ ಮಹಾನಾಡು ಕನಸಲಿ
ತುಂಬಿತ್ತೋ ಆಹಾ ಧೈರ್ಯ ಎದೆಯಲಿ
ಕುಂದಿತ್ತೋ ಅರಿ ಸೈನ್ಯ ಎದುರಿನಲಿ
ಕೆಂಪಿತ್ತೋ ಹೊಸಬಾನು ನಸುಕಲಿ
ಹಂಚಿತ್ತೋ ಸಮಾಚಾರ ಜಗದಲಿ
ಮಿಂಚಿತ್ತೋ ಸದಾ ಶೌರ್ಯ ಅಭಯದಲಿ
ಒಗ್ಗಟ್ಟಾಗಿಯೇ ಬದ್ಧರು ನಾವು
ಪ್ರಾಣಕ್ಕೂ ಸಹ ಸಿದ್ದರು ನಾವು
ಭೂಮಿ ಮೆಟ್ಟಿ ಬಾನ ತಟ್ಟಿ
ಬಾ ಗೆಲ್ಲುವ ತಲೆಯ ಎತ್ತಿ
ಕುಣಿ ಕುಣಿ ಧ್ವಜ ಹಿಡಿದು . . .
ವಿಜಯವಿದು ಕೊಡು
ಸೋಮರಸ ಗುಟುಕೇ ಸುರಿದು . . .