My crude Kannada translation of Rudyard Kipling's "IF" (1895):
ಧೀರ
ಜನ ತಲೆ ಕೆಟ್ಟು ನಿನಗೆ ಶಾಪ ಹಾಕಿದಾಗ,
ನೀನು ಶಾಂತವಾಗಿರು.
ಯಾರೂ ನಿನ್ನನ್ನು ನಂಬದಿದ್ದಾಗ ನಿನ್ನನ್ನು ನೀನು ನಂಬು,
ಆದರೆ ಅವರ ಸಂದೇಹವನ್ನೂ ಗೌರವಿಸು.
ಜೀವನದಲ್ಲಿ ಕಾಯುವುದು ಅನಿವಾರ್ಯ;
ಕಾಯುವುದರಿಂದ ಸುಸ್ತಾಗದಿರು.
ನಿನ್ನ ಬಗ್ಗೆ ಜನ ಸುಳ್ಳು ಹೇಳಿದಾಗ, ನೀನು ಸುಳ್ಳು ಹೇಳದಿರು.
ನಿನ್ನನ್ನು ಜನ ದ್ವೇಷಿಸಿದಾಗ, ನೀನು ದ್ವೇಷಿಸದಿರು.
ಆದರೂ ಸಂತನ ಹಾಗೆ ಕಾಣದಿರು, ಋಷಿಯ ಹಾಗೆ ನುಡಿಯದಿರು.
ನೀನು ಧೀರ, ಮರೆಯದಿರು.
ಕನಸು ಕಾಣು - ಆದರೆ ಕನಸುಗಳು ನಿನ್ನ ಮಾಲೀಕ ಆಗದಿರಲಿ.
ಚಿಂತನೆ ಮಾಡು - ಆದರೆ ಚಿಂತನೆಗಳು ನಿನ್ನ ಗುರಿ ಆಗದಿರಲಿ.
ಗೆಲುವು-ಸೋಲುಗಳನ್ನು ಎದುರಿಸಿ,
ಆ ಎರಡು ವಂಚಕರನ್ನು ಸಮವಾಗಿ ನೋಡು.
ನೀನು ಹೇಳಿದ ಸತ್ಯವನ್ನು ನೀಚರು ತಿರುಚಿಸಿ
ಮೂರ್ಖರಿಗೆ ಬಲೆ ಹೆಣೆದರೆ ಹೆಣೆಯಲಿ.
ನೀನು ಜೀವನ ಕೊಟ್ಟ ಕಾರ್ಯ ನಾಶವಾದಾಗ,
ಬಗ್ಗಿ ಸವೆದು ಹೋದ ಯಂತ್ರಗಳಿಂದ ಅದನ್ನು ಮತ್ತೆ ಕಟ್ಟಿಸು.
ನೀನು ಧೀರ, ಮರೆಯದಿರು.
ಜೀವನದ ಜೂಜಾಟದಲ್ಲಿ ನೀನು ಗೆದ್ದಿದ್ದನ್ನು ಎಲ್ಲ ರಾಶಿ ಮಾಡಿ,
ಅದನ್ನು ನಾಣ್ಯದ ಒಂದು ಎಸೆತದ ಮೇಲೆ ಜೂಜಿಡು.
ಸೋತರೆ ಮತ್ತೆ ಮೊದಲಿನಿಂದ ಆಟ ಶುರು ಮಾಡು;
ಯಾರಿಗೂ ನಿನ್ನ ನಷ್ಟದ ಬಗ್ಗೆ ಹೇಳದಿರು.
ಎದೆ-ನರ-ಸ್ನಾಯುಗಳು ಕಿತ್ತು ಹೋದರೂ ಹೋರಾಟ ಮಾಡು
ನಿನ್ನಲ್ಲಿ "ಮುನ್ನಡೆ!" ಎನ್ನುವ ಮನಸ್ಸು ಒಂದೇ ಉಳಿದಾಗ
ನೀನು ಮುನ್ನಡೆ!
ನೀನು ಧೀರ, ಮರೆಯದಿರು.
ಬಡವರ ಜತೆ ನುಡಿ - ಆದರೆ ಶ್ರೇಷ್ಠನಾಗಿರು.
ಒಡೆಯರ ಜತೆ ನಡೆ - ಆದರೆ ಸಾಮಾನ್ಯನಾಗಿರು.
ಶತ್ರುಗಳು ಮಿತ್ರರು ಯಾರೂ ನಿನ್ನನ್ನು ದುಃಖಿಸಬಲ್ಲರು.
ಎಲ್ಲರನ್ನು ಪ್ರೀತಿಸು, ಯಾರನ್ನೂ ಮೋಹಿಸಬೇಡ.
ನಿರ್ದಯ ದಿನವನ್ನು 24 ಗಂಟೆಗಳ ಕೆಲಸದಿಂದ ತುಂಬಿಸು.
ಈ ಭೂಮಿ ನಿನ್ನದು, ಈ ಭೂಮಿಯ ಸಂಪತ್ತು ನಿನ್ನದು.